Friday, December 17, 2010

ಓಡಿತು ಮನ 
ಎಲ್ಲೋ ದೂರದಲಿ
ನೊಂದಿದೆ ಮನ
ದುಖದಲಿ
ಚಿಂತೆಯಲಿ ಮನ
ಮುಳುಗಿದೆ
ಕತ್ತಲೆಯಲಿ ಮನ
ಕವಿದಿದೆ
ಸೋತಿದೆ ಮನ
ಕೈಲಾಗದೆ
ಬಳಲಿದೆ ಮನ
ಬರಡಾಗಿ
ಈ ಮನಸಿನ ನೋವಿಗೆ ಎಂದು ಕೊನೆ???

ಮಾನವನ ಜೀವನದಲ್ಲಿ ಸುಖ ದುಃಖ ಸರ್ವೇಸಾಮಾನ್ಯ ಆದರೆ ಕೆಲವು ವಿಚಾರಗಳಿಂದ ನಮ್ಮ ಮನಸ್ಸು ನೊಂದಿಕೊಳ್ಳುತದೆ...ಕೆಲವು ಜೀವನ ಪರ್ಯಂತ ನಮ್ಮ ಜೊತೆ ನೋವಾಗಿ ಉಳಿಯುತ್ತದೆ  ... ಇದಕ್ಕೆ ಕೊನೆ ಎಂದು? 

Monday, December 13, 2010

ಮುದ್ದಿನ ಕಂದ

ನನ್ನ ಕಂದನ ಮುಖ, ಬೆಳದಿಂಗಳ ಕಿರಣ
ನನ್ನ ಕಂದನ ನಗು, ಮುತ್ತಿನ ಮಳೆ
ನನ್ನ ಕಂದನ ಅಪ್ಪುಗೆ, ನೆಮ್ಮದಿಯ ಹೊಳೆ
ಯಾವಾಗಲು ನನ್ನ ಬಳಿ ಇರು ಕಂದ ಕ್ಷಣ ಅನುಕ್ಷಣ:)